ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ರೈತರಿಗೆ ವಾರ್ಷಿಕ 6,000 ರೂಪಾಯಿಗಳನ್ನು ನೀಡಲಾಗುತ್ತದೆ. ನಿಮ್ಮ ಖಾತೆಗೆ ಹಣ ಬಂದಿದೆಯಾ ಎಂದು ತಿಳಿಯಲು ಬ್ಯಾಂಕ್‌ಗೆ ಹೋಗಬೇಕಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಚೆಕ್ ಮಾಡಬಹುದು.
ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಮೊದಲು PM Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://pmkisan.gov.in/
ಅಲ್ಲಿ 'Know Your Status' ಮೇಲೆ ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ (Registration Number) ನಮೂದಿಸಿ.
ಕ್ಯಾಪ್ಚಾ (Captcha) ಟೈಪ್ ಮಾಡಿ 'Get OTP' ಕೊಡಿ.
ಈಗ ನಿಮ್ಮ ಸ್ಟೇಟಸ್ ಕಾಣುತ್ತದೆ. ಹಣ ಜಮಾ ಆಗಿದ್ದರೆ 'Payment Processed' ಎಂದು ತೋರಿಸುತ್ತದೆ.
e-KYC ಕಡ್ಡಾಯ: ನೆನಪಿಡಿ, ಹಣ ಪಡೆಯಲು e-KYC ಮಾಡಿಸುವುದು ಕಡ್ಡಾಯ. ಇದನ್ನು ನೀವು ಮೊಬೈಲ್ ನಲ್ಲೇ ಮಾಡಬಹುದು ಅಥವಾ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಮಾಡಿಸಬಹುದು.
©️ Green Village
.jpg)
0 ಕಾಮೆಂಟ್‌ಗಳು